ಗೋಕಾಕ್‌ನಿಂದ ಬೆಂಗಳೂರಿಗೆ ವೀರಪರಂಪರೆ
Posted date: 28/April/2010

ಚೆಲುವಾಂಬಿಕಾ ಪಿಕ್ಚರ‍್ಸ್ ಲಾಂಛನದಲ್ಲಿ ಎಸ್. ನಾರಾಯಣ್ ನಿರ್ಮಿಸಿ, ನಿರ್ದೇಶಿಸುತ್ತಿರುವ ವೀರ ಪರಂಪರೆ ಚಿತ್ರಕ್ಕೆ ಗೋಕಾಕ್ ಸಮೀಪದ ಗ್ರಾಮ ತಲ್ಲೂರು ಗ್ರಾಮದಲ್ಲಿ ಕಳೆದ ೧೪ರಿಂದ ೧೨ ದಿನಗಳ ಚಿತ್ರೀಕರಣ ಮುಗಿಸಿಕೊಂಡು ಈಗ ಗುಲ್ಬರ್ಗಾಕ್ಕೆ ಪ್ರಯಾಣ ಬೆಳಸಿದೆ. ಗುಲ್ಬರ್ಗಾದಲ್ಲಿ ೨೮ರಿಂದ ಮೇ ೪ ರವರೆಗೆ ಶೂಟಿಂಗ್ ನಡೆಸಿಕೊಂಡು ತಂಡ ಬೆಂಗಳೂರಿಗೆ ವಾಪಸ್ಸಾಗಲಿದೆ. ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥರಿಗೆ ಸೇರಿದ ೧೫೦ ವರ್ಷಗಳ ಹಿಂದಿನ ವಿಶಾಲವಾದ ಮನೆಯನ್ನು ವರದೇಗೌಡ (ಅಂಬರೀಶ್)ನ ಮನೆಯನ್ನಾಗಿಸಿ ಕೆಲ ಹೃದಯಸ್ಪರ್ಶಿ ಸನ್ನಿವೇಶಗಳನ್ನು ಹಾಗೂ ಗ್ರಾಮದಲ್ಲಿ ಸಾಹಸ ದೃಶ್ಯಗಳನ್ನು ಅಂಬರೀಶ್, ಸುದೀಪ್, ಐಂದ್ರಿತಾ ರೈ, ವಿಜಯಲಕ್ಷ್ಮೀ ಸಿಂಗ್ ಅವರ ಅಭಿನಯದಲ್ಲಿ  ಚಿತ್ರೀಕರಿಸಲಾಯಿತು.  ಗ್ರಾಮದ ತಂದೆ, ದೇವರು ಎನಿಸಿಕೊಂಡಿದ್ದ ಅಂಬರೀಶ್‌ಗೆ ದುಷ್ಟಶಕ್ತಿಗಳಿಂದ ಆಪತ್ತು ಬಂದೊದಗಿದಾಗ ಆ ದೇವರ ಭಕ್ತನಂತಿದ್ದ ಸುದೀಪ (ತೇಜ) ದೀರ್ಘ ಹೋರಾಟ ಮಾಡಿ ಸಂರಕ್ಷಿಸುತ್ತಾನೆ.  ಎಸ್. ನಾರಾಯಣ್ ನಿರ್ಮಾಣದ ೧೭ನೇ ಚಿತ್ರವಾದ ವೀರಪರಂಪರೆಗೆ ಅವರೇ ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ಸಾಹಿತ್ಯ ಬರೆದು ನಿರ್ದೆಶಕರಾಗಿದ್ದಾರೆ. ಆರ್. ಗಿರಿ ಛಾಯಾಗ್ರಾಹಕರಾಗಿದ್ದಾರೆ. ವಿಜಯಲಕ್ಷ್ಮೀ ಸಿಂಗ್, ಇಲ್ಲಿ ಅಂಬರೀಷ್‌ರ ಪತ್ನಿಯಾಗಿದ್ದಾರೆ. ಕಾಮಿಡಿಗೆ ಶರಣ್ ಇದ್ದಾರೆ. ಮುಂಬೈನ ಸುದೀಪ್ ಧೋ ಖಳನಾಯಕನಾಗಿದ್ದಾರೆ.  ಶೋಭರಾಜ್ ಕೂಡ ಜೊತೆಯಲ್ಲಿದ್ದಾರೆ.  ಐಂದ್ರಿತಾ ರೈ ಹುಡುಗಾಟದ ಹುಡುಗೆ ಹಾಗೂ ಸುದೀಪ್‌ಗೆ ಜೋಡಿ.  ಎಸ್. ನಾರಾಯಣ್ ಅವರ ಚಿತ್ರಗಳೆಂದರೆ ಕನ್ನಡದಲ್ಲಿ ದೊಡ್ಡ ಹೆಸರು.  ಅದೇ ಕಾರಣಕ್ಕೆ ಸುದೀಪ್, ಅಂಬರೀಷ್‌ರಂಥ ದಿಗ್ಗಜರು ಕಥೆ ಏನೆಂದು ಸಹ ಕೇಳದೆ ಕಾಲ್‌ಶೀಟ್ ಕೊಟ್ಟಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed